Click Image for Gallery
ಮಹಾಭಾರತ-ಮೋಕ್ಷಧರ್ಮದ ಉಪದೇಶಗಳು [Mahabharata - Mokshadharmada Upadeshagalu]
ಮಹಾಭಾರತ-ಮೋಕ್ಷಧರ್ಮದ ಉಪದೇಶಗಳು - ೨೫೨ ಪುಟಗಳು; ೧ನೆಯ ಮುದ್ರಣ; ಬೆಲೆ ರೂ.
ಇದರಲ್ಲಿ ಭಾಗವತಧರ್ಮವನ್ನು ಕುರಿತು ನಾರದ-ನಾರಾಯಣರ ಸಂವಾದದ ನಾರಾಯಣೀಯ, ಪ್ರಾಣಿಗಳ ಗತ್ಯಾಗತಿ, ಸೃಷ್ಟಿಪ್ರಲಯಗಳು ಹೇಗೆ ಆಗುವದೆಂದು ಶುಕ-ವ್ಯಾಸರು ನಡೆಸಿದ ಸಂವಾದಭಾಗವಾದ ಶುಕಾನುಶಾಸನ, ಬಂಧಮೋಕ್ಷಗಳನ್ನು ಕುರಿತು ಶುಕರು ವ್ಯಾಸರೊಡನೆ ನಡೆಸಿದ ಧರ್ಮಜಿಜ್ಞಾಸೆಯಿರುವ ಶುಕಾನುಪ್ರಶ್ನ, ಶುಕನು ಜನಿಸಿದ ಬಗೆ, ವ್ಯಾಸರ ಉಪದೇಶ, ಜನಕ ನಾರದರೊಡನೆ ಶುಕನು ಸಂವಾದ ನಡೆಸಿ ಮಹಾನಿರ್ಯಾಣವನ್ನು ಹೊಂದಿದ ಶುಕವೃತ್ತಾಂತ - ಎಂಬ ಮೋಕ್ಷಧರ್ಮಪರ್ವದ ಭಾಗಗಳು ಸೇರಿವೆ. ಶ್ರದ್ಧಾಭಕ್ತಿಯುತರಾದ ಭಾವುಕರೆಲ್ಲರೂ ಪಠಿಸಬೇಕಾಗಿರುವ ಗ್ರಂಥವು.