Click Image for Gallery
ಗೀತಾಶಾಸ್ತ್ರೋಪದೇಶಸೋಪಾನ [Gitashastropadeshasopana]
ಗೀತಾಶಾಸ್ತ್ರೋಪದೇಶಸೋಪಾನ - ೧೪೩ ಪು.; ೧ನೆಯ ಮು.;
ಭಗವದ್ಗೀತೆಯೆಂಬುದು ಅಧ್ಯಾತ್ಮತತ್ತ್ವವನ್ನೆಲ್ಲ ಅಡಗಿಸಿಕೊಂಡಿರುವ ಅದ್ಭುತ ಮಹಿಮೆಯ ಅಲ್ಪಾಕಾರದಗ್ರಂಥವು. ಆದರೆ ಈಗಿನ ಕ್ರಮದಲ್ಲಿ ಓದಿದರೆ ಮನಸ್ಸಿನ ಮೇಲೆ ತತ್ಕಾಲಕ್ಕೆ ಪರಿಣಾಮವೇನೊ ಆಗುತ್ತದೆ, ಆದರೂ ಆಸುರಸಂಪತ್ತಿನ ಚಿತ್ತಸ್ವಭಾವಕ್ಕೆ ಪಕ್ಕಾಗಿರುವ ಮಂದಾಧಿಕಾರಿಗಳಿಗೆ ಯಾವ ಕ್ರಮದಲ್ಲಿ ಅನುಷ್ಠಾನಕ್ಕೆ ತಂದುಕೊಂಡರೆ ತೀರ ಕೆಳಗಿನ ಮೆಟ್ಟಿಲಿನಿಂದ ಸರ್ವೋಚ್ಚವಾದ ಮೆಟ್ಟಿಲಿಗೆ ಏರಿ ಕೃತಕೃತ್ಯರಾಗಬಹುದೋ ಆಕ್ರಮದಲ್ಲಿ ನಿರೂಪಿಸಿರುವ ಗ್ರಂಥ.