Click Image for Gallery
ವೇದಾಂತೋಪದಿಷ್ಟತತ್ತ್ವಜ್ಞಾನ [Vedantopadishtha Tattvajgnana]
ವೇದಾಂತೋಪದಿಷ್ಟತತ್ತ್ವಜ್ಞಾನ (ಉಪನಿಷತ್ ಸಾರವೂ ಗೀತೋಪದೇಶವೂ) - ೭೮ ಪು.; ೧ನೆಯ ಮುದ್ರಣ;
ವೇದಾಂತಗಳೆಂದರೆ ಉಪನಿಷತ್ತುಗಳು. ಭಗವದ್ಗೀತೆಯಲ್ಲಿ ಉಪನಿಷತ್ತುಗಳ ಸಾರವನ್ನು ಏಳುನೂರು ಶ್ಲೋಕಗಳಲ್ಲಿ ಹಿಂಡಿಟ್ಟಿರುತ್ತದೆ. ಉಪನಿಷತ್ತು ನಮ್ಮ ಆತ್ಮನನ್ನು ಮಹಾಂತ, ವಿಭು, ಅಭಯ- ಎಂದು ಮುಂತಾಗಿ ಕರೆಯುತ್ತದೆ. ತಿಳಿದುಕೊಂಡರೆ ಮರ್ತ್ಯನು ಅಮೃತನಾಗುತ್ತಾನೆ ಎನ್ನುತ್ತದೆ. ಹಾಗಾದರೆ ಈ ಅಭಿಪ್ರಾಯವನ್ನೇ ಗೀತೆಯಲ್ಲಿ ಹೇಳಿದೆಯೇ? ಇದು ಅನುಭವಕ್ಕೆ ಹೊಂದುತ್ತದೆಯೇ?- ಎಂದು ವಿಚಾರಮಾಡುವ ಗ್ರಂಥವಿದು.