Click Image for Gallery
ಧಮ್ಮಪದ [Dammapada] ಧಮ್ಮಪದ - ೧೫೧ ಪುಟಗಳು; ೨ನೆಯ ಮುದ್ರಣ;
ಬುದ್ಧಗೀತೆಯೆಂದು ಪ್ರಸಿದ್ಧವಾಗಿರುವ ಪಾಳೀಗ್ರಂಥದ ಅನುವಾದವಿದು. ಬೌದ್ಧರವಿಷಯದಲ್ಲಿ ನಮ್ಮ ದೇಶದವರಿಗಾಗಿರುವ ತಪ್ಪುತಿಳಿವಳಿಕೆಯನ್ನು ಕಳೆದಿರುವದಲ್ಲದೆ ವೇದಾಂತಕ್ಕೂ ಬೌದ್ಧರ ಸಿದ್ಧಾಂತಕ್ಕೂ ಇರುವ ಮುಖ್ಯತಾರತಮ್ಯವನ್ನು ವಿವರಿಸುವ ಪರಿಶಿಷ್ಟವೊಂದನ್ನು ಕೊಟ್ಟಿದೆ. ಪಾಳಿಯ ಗಾಥೆಗಳಿಗೆ ಮಹಾಭಾರತಾದಿಗಳಿಂದ ಆರಿಸಿರುವ ಸಮಾನಾರ್ಥಕಶ್ಲೋಕಗಳೂ ಈ ಗ್ರಂಥದಲ್ಲಿ ಒಂದು ವಿಶೇಷವಾಗಿರುವದು. ಪೀಠಿಕೆ, ಪಾಳೀಮೂಲ, ಸಂಸ್ಕೃತಛಾಯಾಶ್ಲೋಕ, ಕನ್ನಡಾನುವಾದ, ಪರಿಶಿಷ್ಟ, ಗಾಥಾನುಕ್ರಮಣಿಕೆ ಗಳೊಡನೆ ಕೂಡಿದೆ.