Click Image for Gallery
ಶ್ರೀಸೂಕ್ತಭಾಷ್ಯ [Shree Sukta Bashya] ಶ್ರೀಸೂಕ್ತಭಾಷ್ಯ - ೬೪ ಪುಟಗಳು; ೪ನೆಯ ಮುದ್ರಣ;
ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿಗಳು ರಚಿಸಿರುವ ಗ್ರಂಥ. ಶ್ರೀಸೂಕ್ತವು ಋಗ್ವೇದಸಂಹಿತೆಯ ಖಿಲಭಾಗದಲ್ಲೊಂದು. ಇಲ್ಲಿ ಪರಮಾತ್ಮತತ್ತ್ವವನ್ನು ಸ್ತ್ರೀರೂಪದಿಂದ ಸ್ತುತಿಸಿದೆ. ಪ್ರಕೃತಿ-ಪುರುಷರಲ್ಲಿ ಭೇದವಿಲ್ಲವೆಂಬುದನ್ನು ಪ್ರತಿಪಾದಿಸಿದೆ. ಸ್ವಭಾವದಿಂದ ನೋಡಿದರೆ ಸ್ತ್ರೀತ್ತ್ವ-ಪುರುಷತ್ತ್ವ ಎರಡೂ ವಾಸ್ತವವಾಗಿ ಒಂದೇ. ಆರಾಧನೆಗೆ ಬಳಸುವಾಗ ಸಗುಣದ ಕಲ್ಪನೆಯೇ ಇದೆ. ಇಲ್ಲಿಯ ಮಂತ್ರಗಳನ್ನು ಆಧ್ಯಾತ್ಮಿಕವಾಗಿ ವಿವರಿಸಿದೆ.