Click Image for Gallery
ಭಕ್ತಿಚಂದ್ರಿಕೆ [Bhakti Chandrika] ಭಕ್ತಿಚಂದ್ರಿಕೆ - ೨೪೦ ಪುಟಗಳು; ೩ನೆಯ ಮುದ್ರಣ;
ನಾರದಭಕ್ತಿಸೂತ್ರಗಳ ವ್ಯಾಖ್ಯಾನ. ಪ್ರಸ್ಥಾನತ್ರಯಗಳು, ಶ್ರೀಮದ್ಭಾಗವತ,
ವಿಷ್ಣುಪುರಾಣ- ಮುಂತಾದ ಭಕ್ತಿಪ್ರಧಾನವಾದ ಗ್ರಂಥಗಳ ಅವಲೋಕನವನ್ನು ಮಾಡಿ ಈ ಸೂತ್ರಗಳು ಅವೆಲ್ಲವುಗಳಿಗೂ ಹೊಂದಿಕೆಯಾಗಿದೆ ಎಂದು ಮನಗಂಡು ಸೂತ್ರಭಾಷ್ಯದ ಶೈಲಿಯಲ್ಲಿ ಇದನ್ನು ಶ್ರೀಶ್ರೀಗಳವರು ರಚಿಸಿರುತ್ತಾರೆ. ಭಗವದ್ಗೀತೆಯಲ್ಲಿ ಹೇಳಿರುವ ಪರಾಭಕ್ತಿ ಅಥವಾ ಜ್ಞಾನನಿಷ್ಠೆ ಎಂಬುದೇ ಈ ನಾರದಭಕ್ತಿಸೂತ್ರಗಳ ಹೆಗ್ಗುರಿ ಎಂಬುದನ್ನು ಯುಕ್ತ್ಯನುಭವಗಳ ಆಧಾರದಿಂದ ಪ್ರತಿಪಾದಿಸಿರುತ್ತಾರೆ. ಇದನ್ನು ಅಧ್ಯಯನ ಮಾಡಿದರೆ ಪರಾಭಕ್ತಿಯೂ ಜ್ಞಾನವೂ ಶಬ್ದಭೇದವೇ ಹೊರತು ಬೇರೆಬೇರೆಯಲ್ಲ ಎಂಬುದು ಮನವರಿಕೆಯಾಗಿ ಅಧ್ಯಾತ್ಮವಿದ್ಯೆಯ ಮಜಲನ್ನು ತಲುಪಲು ಸುಗಮವಾಗುತ್ತದೆ.