Click Image for Gallery
ಪುರುಷಸೂಕ್ತಭಾಷ್ಯ [Purushasuktabhashya]. ಪುರುಷಸೂಕ್ತಭಾಷ್ಯ - ೮೨ ಪುಟಗಳು; ೫ನೆಯ ಮುದ್ರಣ;
ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿಗಳು ರಚಿಸಿರುವ ಗ್ರಂಥ. ಪುರುಷನೆಂದರೆ ಪರಮಾತ್ಮ. ಮನುಷ್ಯನಿಗೆ ತಿಳಿದಿರುವ ಎಲ್ಲದರಲ್ಲಿಯೂ ತುಂಬಿಕೊಂಡು ಜಗದಾಕರವಾಗಿರುವದೇ ಪುರುಷ. ಅವನ್ನು ಕುರಿತ ಸರಿಯಾದಹೇಳಿಕೆಯೇ ಸೂಕ್ತ. ಪ್ರಪಂಚದಲ್ಲೆಲ್ಲ ಒಳಹೊಕ್ಕು ಲೀಲೆಯಿಂದ ನಮಗೆ ಗೋಚರವಾಗಿರುವ ಪರಮಾತ್ಮನನ್ನು ಕುರಿತು ಸರಳವಾಗಿ ವಿವರಿಸುವ ವೇದಭಾಗವೇ ಪುರುಷಸೂಕ್ತ. ಯಜುರ್ವೇದದ ತೈತ್ತಿರೀಯ ಆರಣ್ಯಕದಲ್ಲಿರುವ ಪೂರ್ವನಾರಾಯಣ ಮತ್ತು ಉತ್ತರನಾರಾಣವೆಂಬ ಭಾಗವನ್ನು ಅಧ್ಯಾತ್ಮದ ದೃಷ್ಟಿಯಿಂದ ವಿವರಿಸಿದೆ.