Click Image for Gallery
ಭಾಗವತಸಂಪ್ರದಾಯ [Bhagavatasampradaya] ಭಾಗವತಸಂಪ್ರದಾಯ- ೧೨೬ ಪುಟಗಳು; ೨ನೆಯ ಮುದ್ರಣ;
ವಾಸುದೇವನೆಂಬ ಹೆಸರಿನಿಂದ ಪರಮಾತ್ಮನನ್ನು ಭಜಿಸುವವರ ಮತವೇ ಭಾಗವತಮತವು. ಭಾಗವತಸಂಪ್ರದಾಯವು ಯಾವದು? ಎಂಬ ವಿಷಯದಲ್ಲಿ ಒಬ್ಬೊಬ್ಬ ಭಾಷ್ಯಕಾರರ ಮತವೂ ಒಂದೊಂದಾಗಿದೆ. ಮುಖ್ಯವಾಗಿ ಆಚಾರ್ಯರು ಸೂತ್ರಭಾಷ್ಯದಲ್ಲಿ ಮಾಡಿರುವ ಪರಾಮರ್ಶದಿಂದಲೂ, ಮಹಾಭಾರತದ ನಾರಾಯಣೀಯೋಪಾಖ್ಯಾನ ದಿಂದಲೂ, ಭಾಗವತ, ವಿಷ್ಣುಪುರಾಣಗಳ ಆಧಾರದಿಂದಲೂ ಶುದ್ಧವಾದ ಭಾಗವತ ಸಂಪ್ರದಾಯವು ಯಾವದು ಎಂಬುದನ್ನು ಶ್ರೀಶ್ರೀಗಳವರು ಸ್ಪಷ್ಟಪಡಿಸಿರುತ್ತಾರೆ.