Click Image for Gallery
ಶಿವಮಹಿಮ್ನಃಸ್ತೋತ್ರ [Shivamahimastotra] ಶಿವಮಹಿಮ್ನಃಸ್ತೋತ್ರ - ೬೮ ಪುಟಗಳು; ೩ನೆಯ ಮುದ್ರಣ;
ಪುಷ್ಪದಂತನೆಂಬ ಗಂಧರ್ವರಾಜನು ಶಿವನಿರ್ಮಾಲ್ಯವನ್ನು ತುಳಿದದ್ದರಿಂದ ಗಂಧರ್ವರಿಗೆ ಸ್ವಾಭಾವಿಕವಾಗಿರುವ ಅಂತರ್ಧಾನಾದಿ ಶಕ್ತಿಯನ್ನು ಕಳೆದುಕೊಂಡು ಭೂಮಿಗೆ ಬಂದಾಗ ಪರಶಿವನನ್ನು ಕುರಿತು ಅನನ್ಯವಾಗಿ ಸ್ತುತಿಸಿರುವ ಸ್ತೋತ್ರವು. ಸಂಸ್ಕೃತ ಮೂಲಶ್ಲೋಕ, ಪ್ರತಿಪದಾರ್ಥ, ವಿವರಣೆಗಳ ಮೂಲಕ ಪ್ರಕಟಿಸಿದೆ. ಶಿವಭಕ್ತಿಯ ಬುಗ್ಗೆಯನ್ನು ಉಕ್ಕೇರಿಸುವ ಈ ಸ್ತೋತ್ರವನ್ನು ಭಾವುಕ ಭಕ್ತರು ಅವಶ್ಯವಾಗಿ ಪಠಿಸಬೇಕು.