Click Image for Gallery
ಶಂಕರಸಿದ್ಧಾಂತ (ಮೂಲಾವಿದ್ಯಾ ವಿಮರ್ಶೆ) - ೯೨ ಪುಟಗಳು; ೩ನೆಯ ಮುದ್ರಣ;
ಶಂಕರಸಿದ್ಧಾಂತವನ್ನು ಪುಷ್ಟಿಗೊಳಿಸುವ ಭರದಲ್ಲಿ ವ್ಯಾಖ್ಯಾನಕರರೂ ಕೆಲವು ಭಾಷ್ಯಕಾರರೂ, ಇಲ್ಲಸಲ್ಲದ ದೋಷಗಳನ್ನು ಆರೋಪಿಸಿದ್ದರು. ‘ಸಹಸ್ರಚಿತ್ತಾರವನ್ನು ಮಸಿ ನುಂಗಿತು’ ಎಂಬ ಗಾದೆಗನುಸಾರವಾಗಿ ಈಗ ಎಲ್ಲೆಲ್ಲಿಯೂ ಪ್ರಚಾರದಲ್ಲಿರುವ ಮೂಲಾವಿದ್ಯಾವಾದನ್ನೂ, ಅತಿಸುಂದರ ಚಿತ್ರದಂತೆ ಇರುವ ಆಚಾರ್ಯರ ಭಾಷ್ಯದ ವೇದಾಂತ ಪ್ರಕ್ರಿಯೆಗೆ ಮಸಿಬಳಿಯುವಂತಿರುವ ವ್ಯಾಖ್ಯಾನಗಳನ್ನೂ ದೂರೀಕರಿಸಿ ಆಚಾರ್ಯರ ಭಾಷ್ಯವಾಕ್ಯ ಗಳಿಂದಲೇ ಶಂಕರಹೃದಯವನ್ನು ವಾಚಕರು ಮನಗಾಣುವಂತೆ ವಿವರಿಸುವ ವ್ಯಾಖ್ಯಾನ. ಮೂಲಾವಿದ್ಯೆಯ ವಾಸನೆಯನ್ನು ಇಟ್ಟುಕೊಳ್ಳದೆಯೇ, ಅದ್ವೈತವನ್ನು ಹೇಗೆ ನೇರಾಗಿ ಅರಿತುಕೊಳ್ಳಬಹುದೆಂಬುದಕ್ಕೆ ಇಲ್ಲಿ ಅನೇಕ ಸೂಚನೆಗಳು ದೊರೆಯುವವು. “ಮೂಲಾವಿದ್ಯಾನಿರಾಸಃ ಅಥವಾ ಶಂಕರಹೃದಯಮ್” ಎಂಬ ಶ್ರೀಶ್ರೀಗಳವರ ಸಂಸ್ಕೃತ ಗ್ರಂಥದಲ್ಲಿರುವ ಆತಿಮುಖ್ಯಾಂಶಗಳನ್ನು ಮಾತ್ರ ಇಲ್ಲಿ ಸಪ್ರಮಾಣವಾಗಿ ಸರಳವಾದ ಕನ್ನಡದಲ್ಲಿಟ್ಟಿರುತ್ತದೆ.