Click Image for Gallery
ಶಂಕರತತ್ತ್ವ - ೮೦ ಪುಟಗಳು; ೨ನೆಯ ಮುದ್ರಣ;
ಶ್ರೀಶ್ರೀಗಳವರು ಅಧ್ಯಾತ್ಮಪ್ರಕಾಶ ಮಾಸಪತ್ರಿಕೆಯಲ್ಲಿ ಬರೆದು ಅನುಗ್ರಹಿಸಿದ್ದ ಲೇಖನಗಳ ಸಂಗ್ರಹ. ಶ್ರೀಶಂಕರಭಗವತ್ಪಾದಾಚಾರ್ಯರು ಉಪದೇಶಿಸಿರುವ ತತ್ತ್ವವೇ ಶಾಂಕರವಾಗಿರುತ್ತದೆ, ಜೀವರುಗಳ ಅಮಂಗಲವಾದ ಮೋಹವನ್ನು ಕಳೆದು ಪರಮಾರ್ಥತತ್ತ್ವವೇ ತಾವೆಂಬ ಮಂಗಲಕರವಾದ ತತ್ತ್ವಜ್ಞಾನವನ್ನು ಆ ಆಚಾರ್ಯರ ಉಕ್ತಿಯೇ ತಂದುಕೊಡುತ್ತದೆ ಎಂಬುದನ್ನು ಸ್ಫುಟಗೊಳಿಸುವದಕ್ಕಾಗಿ ಅವರ ಕೆಲವು ಸೂಕ್ತಿಗಳನ್ನು ಭಾಷ್ಯಗಳಿಂದ ಆರಿಸಿ ರಚಿಸಿರುವ ಗ್ರಂಥವಿದು.