Click Image for Gallery
ಅಧ್ಯಾತ್ಮವೆಂಬ ಮಾತಿನ ವಿವರಣೆಗಾಗಿ ಹೊರಟಿರುವ ಪ್ರಶ್ನೋತ್ತರರೂಪವಾದ ಪುಸ್ತಕ. ಇದನ್ನು ಓದುವವರು ಯಾವ ಶಾಸ್ತ್ರವನ್ನೂ ಓದಿರಬೇಕಾದದ್ದಿಲ್ಲ, ಅಧ್ಯಾತ್ಮವಿಚಾರವು ಈಗಿನ ಜನರಿಗೆ ಅತ್ಯವಶ್ಯವಾಗಿರುವದೆಂಬುದನ್ನೂ ಇದು ಒಂದು ಹೊಸಬಗೆಯ ದೃಷ್ಟಿಯನ್ನು ಕೊಟ್ಟು ಮಾನವಜೀವನದಲ್ಲಿ ಈಗ ಕಾಣಬರುವ ಎಲ್ಲಾ ತೊಡಕುಗಳನ್ನೂ ಬಿಚ್ಚಿಕೊಳ್ಳುವ ಉಪಾಯವನ್ನು ತೋರಿಸಿಕೊಡುವದೆಂಬುದನ್ನೂ ಮನದಟ್ಟಾಗುವಂತೆ ಮಾಡುತ್ತದೆ. ಎಲ್ಲಾ ದೇಶದವರೂ ಎಲ್ಲಾ ಸ್ಥಿತಿಯವರೂ ಸುಖದ ಬಾಳಿನ ಸೊಬಗನ್ನು ಕಂಡುಕೊಳ್ಳಬಹುದಾದ ದಾರಿಯನ್ನು ಬೆಟ್ಟಿಟ್ಟು ತೋರಿಸುವದು.
೨೪ ಪುಟಗಳು;