Click Image for Gallery
ಶ್ರೀಮದ್ಭಗವದ್ಗೀತಾರ್ಥಸರ್ವಸ್ವ-೨೨೮ ಪುಟಗಳು; ೧ನೆಯ ಮುದ್ರಣ;
ಶ್ರೀಶ್ರೀಗಳವರು ಗೀತೆಯಲ್ಲಿ ವಿವಾದಕ್ಕೆಡೆಯಾದ ಭಾಗಗಳನ್ನು ವಿಸ್ತಾರವಾಗಿ ಚರ್ಚಿಸಲು ಬರೆದ ಗ್ರಂಥವಿದು. ಗೀತಾತಾತ್ಪರ್ಯವನ್ನು ನಿರ್ಣಯಿಸುವ ಬಗೆ, ಗೀತೆಯಲ್ಲಿ ಉಪದಿಷ್ಟವಾದ ವಿಷಯವು ಯಾವದು, ಕರ್ಮಯೋಗ, ಧ್ಯಾನಯೋಗ, ಭಕ್ತಿಯೋಗ - ಎಂಬ ಐದು ಪ್ರಕರಣಗಳು ಈ ಗ್ರಂಥದಲ್ಲಿವೆ. ಗೀತೆಯನ್ನು ಪ್ರಸ್ಥಾನತ್ರಯಗಳೊಡನೆ ಹಾಗೂ ಮಹಾಭಾರತದ ಇತರಭಾಗಗಳೊಡನೆ ಹೋಲಿಸಿ ಬರೆದಿರುವ ಪ್ರಬಂಧವಿದು. ವಿಮರ್ಶಾತ್ಮಕವಾಗಿ ಗೀತೆಯನ್ನು ಅಧ್ಯಯನಮಾಡುವವರಿಗೆ ಅತ್ಯುಪಯುಕ್ತವಾಗಿದೆ.