Click Image for Gallery
ಶಂಕರಸಂಸ್ಮರಣ ಮತ್ತು ಶಂಕರಸಿದ್ಧಾಂತಸಂಸ್ಮರಣ - ಪ್ರಶ್ನೋತ್ತರ - ೧೯೨ ಪುಟಗಳು; ೨ನೆಯ ಮುದ್ರಣ;
ಶ್ರೀ ದೇವರಾಯ ಕುಲಕರ್ಣಿ ಹೊಂಬಳ ಇವರು ರಚಿಸಿರುವ ಸ್ವತಂತ್ರ ವಿಮರ್ಶಾತ್ಮಕ ಗ್ರಂಥ. ಶ್ರೀಶ್ರೀಗಳವರ ವಿಚಾರಶೈಲಿಯನ್ನೇ ಪೂರ್ಣವಾಗಿ ಅನುಸರಿಸಿ ಪ್ರಶ್ನೋತ್ತರ ರೂಪವಾಗಿ ನಿರೂಪಿಸಿದ್ದಾರೆ. ಶಂಕರಸಂಸ್ಮರಣದಲ್ಲಿ ಶಾಂಕರವೇದಾಂತದ ಶುದ್ಧಪ್ರಕ್ರಿಯಾರೂಪವನ್ನು ಸುಲಭವಾಗಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಪ್ರಶ್ನೋತ್ತರರೂಪವಾಗಿದೆ. ಶಂಕರಸಿದ್ಧಾಂತಸಂಸ್ಮರಣವು ಸಾಕ್ಷ್ಯನುಭವದ (ಔಪನಿಷತ್ಪುರುಷ) ಒಂದೇ ವಿಷಯವನ್ನು ವಿಸ್ತಾರವಾಗಿ ಸರಳವಾದ ಪ್ರಶ್ನೋತ್ತರರೂಪವಾಗಿ ವಿವರಿಸಿದೆ.