ग्रन्थनाम [Book Name] - ಶ್ರೀ ಶಂಕರಭಗವತ್ಪಾದ ವೃತ್ತಾಂತ ಸಾರ ಸರ್ವಸ್ವ
[Complete Life History of Sri Shankaracharya]
लेखकः [Author] - श्री सच्चिदानन्देन्द्रसरस्वतीस्वामिनः
[Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः
[Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - Demi 1/8th पुटाः [Pages] - 528 Pages
ग्रन्थविवरणम् [Description] - ಶ್ರೀಶಂಕರಾಚಾರ್ಯರ ವಿಷಯಕ್ಕೆ ಪ್ರಚಲಿತವಾಗಿರುವ ’ಶಂಕರವಿಜಯ’ಗಳೆಂಬ ಹೆಸರಿನ ಗ್ರಂಥಗಳಲ್ಲಿರುವ ಕಥೆಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಮಾಧವೀಯ ಶಂಕರವಿಜಯದ ಕಥೆಯನ್ನು ಅನುಸರಿಸಿ ವಿಮರ್ಶಾತ್ಮಕವಾಗಿ ಬರೆದಿರುವ ಪ್ರಬಂಧವಿದು. ಪ್ರತಿಯೊಂದು ವಿಷಯಕ್ಕೂ ಕಥಾವರ್ಣನೆಯ ಸಂದರ್ಭದಲ್ಲಿಯೇ ವಿಮರ್ಶೆಯನ್ನೂ ಗ್ರಂಥಕಾರರ ಸ್ವಾಭಿಪ್ರಾಯವನ್ನೂ ಸ್ಪಷ್ಟವಾಗಿ ತಿಳಿಸುತ್ತಾಹೋಗಿದೆ. ಭಾಷ್ಯಸಿದ್ಧಾಂತಕ್ಕೆ ವಿರುದ್ಧವಾದ ಅಭಿಪ್ರಾಯಗಳನ್ನು ಸಮಯಾನುಸಾರ ಎತ್ತಿ ತೋರಿಸಿದೆ. ಅನೇಕ ಗ್ರಂಥಗಳನ್ನೂ ದಾಖಲೆಗಳನ್ನೂ ಪರಿಶೀಲಿಸಿ ಪ್ರತಿಯೊಂದು ವಿಷಯಕ್ಕೂ ಅಲ್ಲಲ್ಲೇ ಪ್ರಮಾಣಗ್ರಂಥಗಳ ಪುಟಗಳ ಸಮೇತ ಸಮರ್ಥನೆಯನ್ನು ಮಾಡಿದೆ. ಕೊನೆಯಲ್ಲಿ ಒಂಭತ್ತು ಪರಿಶಿಷ್ಟಗಳನ್ನು ಜೋಡಿಸಿದ್ದು ಒಂಭತ್ತನೆಯ ಪರಿಶಿಷ್ಟದಲ್ಲಿ ಪ್ರಸಿದ್ಧವಾಗಿರುವ ಮಠಗಳ ಇತಿಹಾಸವನ್ನೆಲ್ಲ ಸಂಗ್ರಹಿಸಿದೆ. ಕೊನೆಯಲ್ಲಿ ಆಚಾರ್ಯರ ಚರಿತ್ರೆಯೆಂದರೆ ಅವರ ಭಾಷ್ಯಗಳೆ; ಭಾಷ್ಯಗ್ರಂಥಗಳ ಪಠನಮನನಗಳ ಮೂಲಕವೇ ಆ ಜಗದ್ಗುರುಗಳನ್ನು ಆರಾಧಿಸಬೇಕು, ಇದಕ್ಕಿಂತ ಹೆಚ್ಚಿನ ಮಾರ್ಗವು ಯಾವದೂ ಇಲ್ಲ - ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.