Click Image for Gallery
ಮಹಲಿಂಗರಂಗನ ಅನುಭವಾಮೃತಕಾವ್ಯ -೭೦೦ ಪು.; ೧ನೆಯ ಮು.;
ಕನ್ನಡದಲ್ಲಿ ಅದ್ವೈತವೇದಾಂತದ ಪ್ರಮುಖ ತತ್ತ್ವಗಳನ್ನು ತಿಳಿಯಾದ ಭಾಷೆಯಲ್ಲಿ ದೃಷ್ಟಾಂತಗಳ ಸಂಪತ್ತಿನಿಂದ ನಿರೂಪಿಸಿದ ಗ್ರಂಥವೇ ಅನುಭವಾಮೃತ. ಈ ಕಾವ್ಯದಲ್ಲಿ ತತ್ತ್ವಮಸಿ ನಿರ್ಣಯ, ಸಪ್ತಭೂಮಿಕೆಗಳು, ಪರಮಾತ್ಮಪದ ನಿರೂಪಣೆ, ಮಾಯಾ ಮಿಥ್ಯಾ ಜೀವತ್ರಯ, ಜೀವನ್ಮುಕ್ತಿ ನಿರ್ಗುಣಾರಾಧನೆ - ಮೊದಲಾದ ಅದ್ವೈತದ ವಿಷಯಗಳನ್ನು ಭಾಮಿನೀಷಟ್ಪದಿಯಲ್ಲಿ ೮೦೦ ಲಲಿತವಾದ ಪದ್ಯಗಳಲ್ಲಿ ಕವಿ ನಿರೂಪಿಸಿದ್ದಾನೆ. ಟಿಪ್ಪಣಿ, ವಿವರಣೆ, ಪಾಠಾಂತರ, ಶಬ್ದಾರ್ಥಗಳಿಂದ ಕೂಡಿಸಿ ಸರ್ವಾರ್ಥಸಂದರ್ಶಿನೀ - ಎಂಬ ಟೀಕೆಯನ್ನು ಹೊಸಕೆರೆ ಚಿದಂಬರಯ್ಯನವರು ಬರೆದಿದ್ದರು. ಆ ಗ್ರಂಥವನ್ನು ಪರಿಷ್ಕರಿಸಿ ಗದ್ಯಾನುವಾದ ದೊಂದಿಗೆ ಪದ್ಯಗಳ ಅಕಾರಾದಿ, ಗ್ರಂಥಸೂಚೀ, ಮುಖ್ಯಪದಗಳ ವಿಸ್ತಾರ, ಪೀಠಿಕೆ ಅನುಬಂಧಗಳೊಂದಿಗೆ ಪ್ರೊ|| ಜಿ. ಅಶ್ವತ್ಥನಾರಾಯಣರವರು ಸಂಪಾದಿಸಿದ್ದಾರೆ. ಮುಮುಕ್ಷುಗಳಿಗೆ ಅಂಗೈನೆಲ್ಲಿಯಂತಿರುವ ಗ್ರಂಥ.