ಪರಮಾರ್ಥಚಿಂತಾಮಣಿ-೭೩೪ ಪುಟಗಳು; ೫ನೆಯ ಮುದ್ರಣ;
ಎರಡು ಭಾಗಗಳಿಂದ ಕೂಡಿದೆ. ಒಂದನೇ ಭಾಗದಲ್ಲಿ, ಒಣತರ್ಕದ ತಲೆನೋವಿಲ್ಲದೆ, ಶಾಸ್ತ್ರಗಳ ಹಂಗಿಲ್ಲದೆ, ಈಗಲೇ ನೀವಿರುವಲ್ಲಿಯೇ, ಅನುಭವಕ್ಕೆ ಬರುವಂತೆ ಇಡಿಯ ವಿಶ್ವದ ತಿರುಳನ್ನು ಸುಲಭವಾಗಿ ಕಂಡುಕೊಳ್ಳುವ ಮನನಕ್ರಮವನ್ನು ತಿಳಿಯಪಡಿಸುವ ತಿಳಿಗನ್ನಡದ ಅತ್ಯಮೂಲ್ಯ ಗ್ರಂಥವಿದು. ಉಪನಿಷತ್ತುಗಳಲ್ಲಿಯೂ ಶಾಂಕರಭಾಷ್ಯವಾರ್ತಿಕಗಳಲ್ಲಿಯೂ ಜ್ಞಾನಪ್ರಕರಣದಲ್ಲಿ ತುಂಬಿತುಳುಕಾಡುತ್ತಿರುವ ಅವಸ್ಥಾತ್ರಯಪ್ರಕ್ರಿಯೆಯ ಗುಟ್ಟನ್ನೆಲ್ಲ ಪ್ರಮಾಣವಚನಸ್ಥಾನಸೂಚನಾಪೂರ್ವಕವಾಗಿ ಕ್ರಮಕ್ರಮವಾಗಿ ಹೊರಪಡಿಸಿ, ಶ್ರುತ್ಯನುಗ್ರಹೀತವಾದ ವ್ಯಾಪಕತರ್ಕದಿಂದಲೂ ಅದಕ್ಕನುಗುಣವಾದ ಲೌಕಿಕಯುಕ್ತಿಗಳಿಂದಲೂ ಮನಗಾಣಿಸುವ ಗ್ರಂಥವು. ಎರಡನೇ ಭಾಗದಲ್ಲಿ ಉಪನಿಷತ್ಸಿದ್ಧಾಂತ, ಪಾಶ್ಚಾತ್ಯದರ್ಶನ ಮತ್ತು ಇತರ ದರ್ಶನಗಳ ವಿಮರ್ಶೆಯನ್ನು ಮಾಡಿರುತ್ತಾರೆ. ಪಾಶ್ಚಾತ್ಯ-ಪೌರ್ವಾತ್ಯ ತತ್ತ್ವವಿಚಾರಗಳು ಹೇಗೆ ಭಿನ್ನವಾಗಿದೆ, ಪೌರ್ವಾತ್ಯ ಸರಣಿಯು ಹೇಗೆ ಪರಿಪೂರ್ಣವಾಗಿದೆ ಎಂಬುದನ್ನು ಮನಗಾಣಿಸಿದ್ದಾರೆ. ಪರಮಾರ್ಥವನ್ನು ಕಂಡುಕೊಳ್ಳುವ ಒಂದೇ ಉದ್ದೇಶದಿಂದ ಓದಿ ಚಿಂತನೆಗೆ ಇಟ್ಟುಕೊಂಡರೆ ವಿಷಯವು ಮನಸ್ಸಿಗೆ ಸುಲಭವಾಗಿ ಹತ್ತುವದು. ಆನಂದವು ದಕ್ಕುವದು, ಶ್ರೀಶ್ರೀಗಳವರ ಕನ್ನಡದ ಮೇರುಕೃತಿ.
-
Your shopping cart is empty!