Click Image for Gallery
ನೈಷ್ಕರ್ಮ್ಯಸಿದ್ಧಿ [Naishkarmya Siddhi] ನೈಷ್ಕರ್ಮ್ಯಸಿದ್ಧಿ - ೪೧೪ ಪುಟಗಳು; ೪ನೆಯ ಮುದ್ರಣ;
ಶ್ರೀಸುರೇಶ್ವರಾಚಾರ್ಯರು ರಚಿಸಿರುವ ಪ್ರಕರಣಗ್ರಂಥ. ವೇದಾಂತಶಾಸ್ತ್ರದಲ್ಲಿ ಹೇಳಿರುವ ನೈಷ್ಕರ್ಮ್ಯಸಿದ್ಧಿ (ನಿಷ್ಕ್ರಿಯಾತ್ಮಸ್ವರೂಪದಿಂದ ನೆಲೆನಿಲ್ಲುವದೆಂಬ ಸದ್ಯೋಮುಕ್ತಿಯ ಸಿದ್ಧಿಯು) ಎಂಬ ಮುಖ್ಯಾಂಶಕ್ಕೆ ಸಂಬಂಧಪಟ್ಟಿದ್ದು, ಆ ಶಾಸ್ತ್ರದಲ್ಲಿ ಅಲ್ಲಲ್ಲಿ ಅಷ್ಟಷ್ಟು ಹೇಳಿರುವದನ್ನು ಒಕ್ಕೆಡೆಸಂಗ್ರಹಿಸಿ ಹೇಳಿದೆ. ಮೋಕ್ಷವು ಆತ್ಮನ ಸ್ವರೂಪವೇ ಎಂದೂ, ಆ ಸ್ವರೂಪದಲ್ಲಿ ಯಾವ ಕರ್ಮದ ಹಂಗೂ ಇಲ್ಲವೆಂದು ತತ್ತ್ವಮಸೀ ವಾಕ್ಯಾರ್ಥವನ್ನು ಮಾಡುವಮೂಲಕ ತಿಳಿಸಿದೆ. ಪೀಠಿಕೆ, ಮೂಲ, ಭಾಷ್ಯ, ಅನುವಾದ, ಟಿಪ್ಪಣಿ, ಶ್ಲೋಕಾನುಕ್ರಮಣಿಕೆಗಳಿಂದ ಶ್ರೀಶ್ರೀಗಳವರು ಅಲಂಕರಿಸಿದ್ದಾರೆ.