ग्रन्थनाम [Book Name] - ಬೃಹದಾರಣ್ಯಕ ಉಪನಿಷತ್ ಭಾಷ್ಯ (೨ ಸಂಪುಟಗಳಲ್ಲಿ)
[Brihadaranyaka Upanishat Bhashya (2 Vols)]
लेखकः [Author] - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - आङ्ग्लभाषा [ಕನ್ನಡ]
विचारः [Topic] - वेदान्तः (उपनिषत्) [Vedanta (Upanishat)]
आकारः [Size] - Demi 1/8th पुटाः [Pages] - 768 + 1060
ग्रन्थविवरणम् [Description] - ಶುಕ್ಲಯಜುರ್ವೇದಕ್ಕೆ ಸೇರಿದ ಉಪನಿಷತ್ತು. ಹೆಸರಿಗೆ ತಕ್ಕಂತೆ ದೊಡ್ಡದಾಗಿಯೇ ಇದೆ. ಆಚಾರ್ಯರೂ ವಿಸ್ತಾರವಾಗಿಯೇ ಭಾಷ್ಯವನ್ನೂ ಬರೆದಿರುತ್ತಾರೆ. ಮಧುಕಾಂಡವೆಂದು ಪ್ರಸಿದ್ಧವಾಗಿರುವ ಮೊದಲ ಎರಡು ಅಧ್ಯಾಯಗಳಲ್ಲಿ ಆಗಮಪ್ರಧಾನ(ಉಪದೇಶಿಸುವ ಕ್ರಮ)ವಾಗಿ ತತ್ತ್ವವನ್ನು ತಿಳಿಸಿದೆ. ಮುನಿಕಾಂಡವೆಂದು ಪ್ರಸಿದ್ಧವಾಗಿರುವ ಮೂರು ನಾಲ್ಕನೆಯ ಅಧ್ಯಾಯಗಳಲ್ಲಿ ತರ್ಕಪ್ರಧಾನವಾದ ಆಗಮ-ಉಪನಿಷತ್ತುಗಳಿಂದ ತತ್ತ್ವವನ್ನು ತಿಳಿಸಿದೆ. ಕೊನೆಯ ಎರಡು ಅಧ್ಯಾಯಗಳು ಖಿಲಕಾಂಡವೆಂದು ಪ್ರಸಿದ್ಧವಾಗಿದ್ದು ಉಪಾಸನಾಭಾಗವನ್ನು ಒಳಗೊಂಡಿದೆ. ಅವಸ್ಥಾತ್ರಯ ಪರೀಕ್ಷೆಯಿಂದ ಆತ್ಮಸ್ವರೂಪವನ್ನು ಗೊತ್ತುಪಡಿಸುವ ವಿಚಾರಸರಣಿಯು ಬಹಳ ಸುಂದರವಾಗಿದೆ. ಯಾಜ್ಞವಲ್ಕ್ಯ-ಮೈತ್ರೇಯೀ ಸಂವಾದ, ಜನಕ- ಯಾಜ್ಞವಲ್ಕ್ಯಸಂವಾದ - ಮುಂತಾದ ಕಥಾನಕಗಳ ಮೂಲಕ ತತ್ತ್ವವನ್ನು ಹೃದಯಂಗಮವಾಗಿ ಪ್ರತಿಪಾದಿಸಿದೆ. ಆಚಾರ್ಯರು ತಮ್ಮ ಭಾಷ್ಯದಲ್ಲಿ ವಿಸ್ತಾರವಾದ ಚರ್ಚೆಯನ್ನು ಮಾಡಿ ಉಪನಿಷತ್ತಿನ ರಹಸ್ಯವನ್ನು ಹೊರಗೆಡವಿರುತ್ತಾರೆ. ಶಾಂಕರವೇದಾಂತದ ಅಮೋಘವಿಚಾರಗಳ ಮನನಕ್ಕೆ ಅತ್ಯುತ್ತಮಗ್ರಂಥ. ಪೀಠಿಕೆ, ಉಪನಿಷತ್ತಿನ ಮತ್ತು ಭಾಷ್ಯದ ಸಂಸ್ಕೃತ ಮೂಲ, ಅನುವಾದ, ಟಿಪ್ಪಣಿ, ಸಾರ, ಮಂತ್ರಾನುಕ್ರಮಣಿಕೆ ಶಬ್ದಾನುಕ್ರಮಣಿಕೆ, ಕಾಣ್ವ-ಮಾಧ್ಯಂದಿನಪಾಠಗಳ ಹೋಲಿಕೆಗಳೊಡನೆ ಕೂಡಿದೆ.