Click Image for Gallery
ಪ್ರಶ್ನ ಉಪನಿಷತ್ ಭಾಷ್ಯ [Prashna Upanishat Bhashya]
ಪ್ರಶ್ನೋಪನಿಷದ್ಭಾಷ್ಯ- ೧೯೪ ಪುಟಗಳು; ೬ನೆಯ ಮುದ್ರಣ;
ಅಥರ್ವಣವೇದಕ್ಕೆ ಸೇರಿದ ಉಪನಿಷತ್ತು. ಮುಂಡಕೋಪನಿಷತ್ತಿನಲ್ಲಿ ಪ್ರತಿಪಾದಿತ ವಾಗಿರುವ ವಿಷಯಗಳನ್ನು ಇಲ್ಲಿ ವಿವರಿಸಿದೆ. ಮುಂಡಕ-ಪ್ರಶ್ನಗಳ ಸಂಬಂಧವನ್ನು ವಿಶದೀಕರಿಸಿ ಅಕ್ಷರಾಖ್ಯಪರಮಾತ್ಮನ ಜ್ಞಾನದಿಂದ ಸದ್ಯೋಮುಕ್ತಿಯೂ ಉಪಾಸನೆಯಿಂದ ಕ್ರಮಮುಕ್ತಿಯೂ ಆಗುವದೆಂದು ನಿರೂಪಿಸಿದೆ. ಆಚಾರ್ಯರು ಅವಸ್ಥಾತ್ರಯ, ಜ್ಞಾನಸ್ವರೂಪ, ಕರ್ತೃಸ್ವರೂಪ - ಎಂಬ ಮೂರು ವಿಷಯಗಳನ್ನು ವಿಸ್ತಾರವಾಗಿ ಚರ್ಚಿಸಿರುತ್ತಾರೆ. ಪೀಠಿಕೆ, ಉಪನಿಷತ್ತಿನ ಮತ್ತು ಭಾಷ್ಯದ ಸಂಸ್ಕೃತ ಮೂಲ, ಅನುವಾದ, ಟಿಪ್ಪಣಿ, ಸಾರ, ಮಂತ್ರಾನುಕ್ರಮಣಿಕೆ ಶಬ್ದಾನುಕ್ರಮಣಿಕೆಗಳೊಡನೆ ಕೂಡಿದೆ.