Click Image for Gallery
ಮುಂಡಕ ಉಪನಿಷತ್ ಭಾಷ್ಯ [Mundaka Upanishat Bhashya]
ಮುಂಡಕೋಪನಿಷದ್ಭಾಷ್ಯ-೧೮೭ ಪುಟಗಳು; ೫ನೆಯ ಮು.;
ಅಥರ್ವಣವೇದಕ್ಕೆ ಸೇರಿದ ಉಪನಿಷತ್ತು. ವೇದೋಕ್ತವಾದ ವಿದ್ಯೆಯನ್ನು ಪರವಿದ್ಯೆ, ಅಪರವಿದ್ಯೆ - ಎರಡು ವರ್ಗಗಳಾಗಿ ವಿಂಗಡಿಸಿ ಜಗತ್ಕಾರಣವಾದ ಅಕ್ಷರವೆಂಬ ಹೆಸರಿನ ಅದ್ವಿತೀಯಬ್ರಹ್ಮವನ್ನು ಅರಿತುಕೊಳ್ಳುವ ವಿದ್ಯೆಯೇ ಪರವಿದ್ಯೆ ಎಂದು ತಿಳಿಸಿದೆ. ಎಲ್ಲವೂ ಬ್ರಹ್ಮವೊಂದೇ ಆಗಿರುವದರಿಂದ ಅದನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತಂತೆ ಆಗುವದೆಂತಲೂ, ಈ ಬ್ರಹ್ಮಜ್ಞಾನದಿಂದ ಜೀವನ್ಮುಕ್ತಿಯು ಲಭಿಸುವದೆಂತಲೂ ತಿಳಿಸಿದೆ. ಜ್ಞಾನಕ್ಕೆ ಬೇಕಾದ ಸತ್ಯಾದಿಸಾಧನಗಳನ್ನೂ ಪ್ರತಿಪಾದಿಸಿರುವದು ಇದರ ವಿಶೇಷ. ಪೀಠಿಕೆ, ಉಪನಿಷತ್ತಿನ ಮತ್ತು ಭಾಷ್ಯದ ಸಂಸ್ಕೃತ ಮೂಲ, ಅನುವಾದ, ಟಿಪ್ಪಣಿ, ಸಾರ, ಮಂತ್ರಾನುಕ್ರಮಣಿಕೆ ಶಬ್ದಾನುಕ್ರಮಣಿಕೆಗಳೊಡನೆ ಕೂಡಿದೆ.