ग्रन्थनाम [Book Name] - ಕುರುಡು ಕಾಂಚಾಣ [Kurudu Kanchana]
लेखकः [Author] - अशोक हेगड़े [Ashoka Hegde]
प्रकाशकः [Publisher] - अक्षरा प्रकाशनम् [Akshara Prakashana]
भाषा [Language] - कन्नड [ಕನ್ನಡ]
विचारः [Topic] -
आकारः [Size] पुटाः [Pages] -
ग्रन्थविवरणम् [Description] - ಪ್ರಜಾವಾಣಿಯ ಕಾಲಂಗಳಲ್ಲಿ, ನಾನು ತಪ್ಪದಂತೆ ಓದುವ ಕೆಲವು ಕಾಲಂಗಳಿವೆ- ಅವುಗಳಲ್ಲಿ ಮುಖ್ಯವಾದದ್ದು, ಅಶೋಕ ಹೆಗಡೆ ಬರೆಯುವ ಕುರುಡು ಕಾಂಚಾಣ. ಅರ್ಥಶಾಸ್ತ್ರ ತನ್ನ ನಿಜದ ಅರ್ಥದಲ್ಲಿ ಮಾರ್ಕೆಟ್‌ಕೇಂದ್ರಿತ ಶಾಸ್ತ್ರವಾಗದೆ ಮಾನವ ಹಿತದ ವಿಶ್ಲೇಷಣೆಯ ಶಾಸ್ತ್ರವಾಗುವುದು ಅಶೋಕರ ಬರವಣಿಗೆಯಲ್ಲಿ. ಶಾಸ್ತ್ರದ ಖಾಚಿತ್ಯದ ಗುಣಗಳನ್ನು ಬಿಟ್ಟುಕೊಡದಂತೆ, ಆದರೆ ಸಾಮಾನ್ಯ ಓದುಗರ ಗ್ರಹಿಕೆಗೆ ಕಷ್ಟವಾದ ಶಾಸ್ತ್ರದ ಟೆಕ್ನಿಕಲ್ ಭಾಷೆಗೆ ಬಂದಿಯಾಗದಂತೆ ಬರೆಯುವ ಅಶೋಕ ಹೆಗಡೆಯವರು, ನಮ್ಮ ಕಾಲದ ಅಪೂರ್ವ ಧೀಮಂತರಲ್ಲಿ ಒಬ್ಬರು. ವೈಯಕ್ತಿಕವಾಗಿ ಹೇಳುವುದಾದರೆ, ಸಮಾಜವಾದಿಯಾಗಿ ಬೆಳೆದು ಬಂದಿರುವ ನಾನು ಭಾವುಕವಾಗಿ ಪರಿಭಾವಿಸುವುದದಬ್ಬು ಈ ಕಾಲದ ವಿದ್ಯಮಾನಗಳ ಹಿನ್ನೆಲೆಯಲ್ಲಿ ವೈಚಾರಿಕವಾಗಿಯೂ ಗ್ರಹಿಸುವಂತೆ ನನಗೆ ಕಲಿಸುತ್ತ ಇರುವ ಕನ್ನಡ ಬರಹಗಾರರಲ್ಲಿ ಅಶೋಕ ಮುಖ್ಯರು.