ಚಿದಾನಂದರಗಳೆ, ಚಿದಾನಂದಸವಾಯಿ, ಮತ್ತು ಬಗಳಾಬ್ರಹ್ಮಾತ್ಯೈಕ್ಯ ಸ್ತೋತ್ರ [Chidanandaragale, Chidanandasavayi, and Bagalabrahmatyaikya Stotra]
ಚಿದಾನಂದರಗಳೆ, ಚಿದಾನಂದಸವಾಯಿ ಮತ್ತು ಬಗಳಾಬ್ರಹ್ಮಾತ್ಯೈಕ್ಯ ಸ್ತೋತ್ರ - ೨೪ ಪುಟಗಳು; ೨ನೆಯ ಮುದ್ರಣ;
ಚಿದಾನಂದಾವಧೂತರು ಲಲಿತವಾಗಿ ರಚಿಸಿರುವ ಮಂದಾನಿಲರಗಳೆಯ ಪದ್ಯಗಳ
ವೇದಾಂತಪ್ರಕರಣ. ಸದ್ಗುರುವಿನ ಶಿಷ್ಯರಿಗೆ ಆಗುವ ಜ್ಞಾನದ ಮಹಿಮೆಯನ್ನು ಹೃದಯಂಗಮವಾಗಿ ಬಣ್ಣಿಸುವದೇ ಚಿದಾನಂದರಗಳೆ. ಚಿದಾನಂದಸವಾಯಿ ಅಥವಾ ಚಿದಾನಂದ ಕೊರಡೆ - ಎಂಬ ನಾಮಾಂತರದಿಂದ ಪ್ರಸಿದ್ಧವಾಗಿರುವ ಅಧ್ಯಾತ್ಮಗ್ರಂಥವಿದು. ಲೋಕವ್ಯವಹಾರವನ್ನು ಸರಿಯಾಗಿ ನಡೆಯಿಸಿಕೊಂಡು ಸಾಧನವನ್ನು ಮಾಡುತ್ತಿದ್ದು ಸದ್ಗುರುವಿನ ಬೋಧೆಯಿಂದ ಜ್ಞಾನವನ್ನು ಸಂಪಾದಿಸಬೇಕು - ಎಂಬ ಉಪದೇಶವನ್ನು ೧೪೭ ಪದ್ಯಗಳಲ್ಲಿ ವರ್ಣಿಸಿದೆ. ಬಗಳಾಂಬೆಯನ್ನು ಚೌಪದಿರೂಪದಲ್ಲಿ ಹಾಡಿಹೊಗಳಿರುವ ಹಾಡುಗಬ್ಬವೇ ಬಗಳಾಬ್ರಹ್ಮಾತ್ಯೈಕ್ಯ ಸ್ತೋತ್ರ - ಇವನ್ನು ಟಿಪ್ಪಣಿ ಸಮೇತ ಶ್ರೀಶ್ರೀಗಳವರು ಪ್ರಕಟಿಸಿರುತ್ತಾರೆ. (ಇವನ್ನು ವಿವರಣೆಯೊಡನೆ ಮತ್ತೆ ಪ್ರಕಟಿಸಲಾಗುವದು.)
-
Your shopping cart is empty!